Home » Sports »

ಆಡಿಲೇಡ್ ಟೆಸ್ಟ್ :ಉತ್ತಮ ಮೊತ್ತ ಪೇರಿಸಿದ ಆಸ್ಟ್ರೇಲಿಯಾ

 

ಆಡಿಲೇಡ್ (ಆಸ್ಟ್ರೇಲಿಯಾ):ಭಾರತಮತ್ತು ಆಸ್ಟ್ರೇಲಿಯದ ನಡುವೆ ನಡೆಯುತ್ತಿರುವ ನಾಲ್ಕನೇ ಹಾಗು ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಆರುನೂರ ನಾಲ್ಕು ರನ್ನುಗಳಿಗೆ ಏಳು ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಅಂತ್ಯ ಗೊಳಿಸಿದೆ.ಆಸ್ಟ್ರೇಲಿಯದ ಪರ ಪಾಂಟಿಂಗ್ ಇನ್ನೂರ ಇಪ್ಪತ್ತ ಒಂದು ಮತ್ತು ನಾಯಕ ಕ್ಲಾರ್ಕ್ ಇನ್ನೂರ ಹತ್ತು ರನ್ ಬಾರಿಸಿ ಉತ್ತಮ ಅಡಿಪಾಯ ಹಾಕಿ ಕೊಟ್ಟರು.ಭಾರತದ  ಪರ ಝಹೀರ್ ಖಾನ್ ಎರಡು ಮತ್ತು ಅಶ್ವಿನ್ ಮೂರು ವಿಕೆಟ್ ಪಡೆದರು.

ಇದಕ್ಕೆ ಉತ್ತರವಾಗಿ ಆಟ ಆರಂಭಿಸಿದ ಭಾರತ ಅರವತ್ತ ಏಳು ರನ್ ಗಳಿಗೆ ಎರಡು ವಿಕೆಟ್ ಕಳೆದು ಕೊಂಡಿದೆ.ಸೆಹ್ವಾಗ್ ಹದಿನೆಂಟು ಮತ್ತು ದ್ರಾವಿಡ್ ಒಂದು ರನ್ ಗಳಿಸಿ ಔಟ್ ಆಗಿದ್ದು,ಗಂಭೀರ್ ಮೂವತ್ತು ಮತ್ತು ಸಚಿನ್ ಹನ್ನೆರಡು ರನ್ ಗಳಿಸಿ ಕ್ರೀಸ್ ನಲ್ಲಿ ಇದ್ದಾರೆ.


 

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment