Home » Uncategorized »
ಅಬು ಸಲೇಂ ವಿರುದ್ಧ ಟಾಡಾ ವಿಚಾರಣೆಗೆ ಸುಪ್ರೀಂ ತಡೆ
ಹೊಸದಿಲ್ಲಿ : ಪೋರ್ಚುಗಲ್ ನ್ಯಾಯಾಲಯದ ಆದೇಶವನ್ನು ಪರಿಗಣಿಸಿ ಅಬು ಸಲೇಂ ವಿರುದ್ಧ ಟಾಡಾ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆ ನೀಡಿದೆ. ಗಡಿಪಾರಿನ ನಿಯಮಾವಳಿಗಳು ಉಲ್ಲಂಘನೆಯಾದಲ್ಲಿ ಅವರ ಗಡಿಪಾರನ್ನು ಕೊನೆಗಾಣಿಸಬೇಕು ಎಂದು ಪೋರ್ಚುಗಲ್ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಆದರೆ, ಇತರ ಐದು ಪ್ರಕರಣಗಳ ವಿಚಾರಣೆಗೆ ತಡೆ ನೀಡಲು ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ಪೀಠ ನಿರಾಕರಿಸಿದೆ. ಜತೆಗೆ ತನ್ನ ವಿರುದ್ಧದ ಎಲ್ಲ ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಸಲೇಂ ಸಲ್ಲಿಸಿರುವ ಅರ್ಜಿ ಸಂಬಂಧ ಸಿಬಿಐ ಹಾಗೂ ಕೇಂದ್ರ ಸರಕಾರಕ್ಕೆ ಪೀಠ ನೋಟಿಸ್ ನೀಡಿದೆ. ನಾಲ್ಕು ವಾರದೊಳಗೆ ಅರ್ಜಿಗೆ ಉತ್ತರಿಸುವಂತೆ ಸಿಬಿಐ ಹಾಗೂ ವಿದೇಶ ವ್ಯವಹಾರಗಳ ಸಚಿವಾಲಯಕ್ಕೆ ಪೀಠ ಆದೇಶಿಸಿದ್ದು, ಸಲೇಂ ಅರ್ಜಿ ಸಂಬಂಧ ನಿರ್ಣಯ ಕೈಗೊಳ್ಳಲು ನೆರವಾಗುವಂತೆ ಅಟಾರ್ನಿ ಜನರಲ್ ಜಿ. ಇ. ವಾಹನ್ವತಿಗೆ ಸೂಚಿಸಿದೆ.
ಟಾಡಾ ವಿಚಾರಣೆ ನಡೆಸುತ್ತಿರುವ ಎರಡು ಪ್ರಕರಣಗಳ ಪೈಕಿ, 1993ರ ಮುಂಬಯಿ ಸರಣಿ ಸ್ಫೋ ಟಕ್ಕೆ ಸಂಬಂಧಿಸಿದ ಪ್ರಕರಣವೂ ಸೇರಿದೆ. `ಕೋರ್ಟ್ ನ ಆದೇಶ ಹಾಗೂ ಪೋರ್ಚುಗಲ್ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಯನ್ನು ನಾವು ಗೌರವಿಸಬೇಕು’ ಎಂದು ಪೀಠ ಅಭಿಪ್ರಾಯಪಟ್ಟಿದೆ.




0 Comments
You can be the first one to leave a comment.