`ಅದ್ದೂರಿ’ತನ ಮೆರೆದ ದರ್ಷನ್ – ಸುದೀಪ್ ಜೋಡಿ

 

ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ದರ್ಷನ್ – ಸುದೀಪ್ ಜೋಡಿಗೆ ಅದೇನಾಗಿದೆಯೋ ಏನೋ ಗೊತ್ತಿಲ್ಲ. ಇತ್ತೀಚೆಗಂತು ಒಬ್ಬರನ್ನೊಬ್ಬರು ಬಿಟ್ಟಿರಲಾರರು ಯಾವುದೇ ಕಾರ್ಯಕ್ರಮವಿರಲಿ ಇಬ್ಬರೂ ತಪ್ಪದೆ ಹಾಜರಾಗುತ್ತಾರೆ. ಮೊನ್ನೆ ದರ್ಷನ್ ಹುಟ್ಟುಹಬ್ಬದಂದು ಕಾಣಿಸಿಕೊಂಡಿದ್ದಕ್ಕೆ ಅರ್ತವಿದೆ. ಆದರೆ, ಅದ್ದೂರಿ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಹಲವರ ಅದರಲ್ಲೂ ಗಾಂಧಿನಗರದವರ ಹುಬ್ಬೇರಿಸಿದೆ.

ಹುಬ್ಬಳ್ಳಿಯಲ್ಲಿ ನಡೆದ ರಾಜ್ಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ಶಿವರಾಜ್ ಕುಮಾರ್ ಜತೆ ಕಿರಿಕ್ ಮಾಡಿಕೊಂಡ ನಂತರ ಸುದೀಪ್ ದರ್ಷನ್ ಹಿಂದೆ ಬಿದ್ದಿದ್ದಾರೆ. ಇತ್ತೀಚೆಗೆ ನಡೆದ ಸಿಸಿಎಲ್ ಪಂದ್ಯಾವಳಿಯಲ್ಲೂ ದರ್ಷನ್ಗೆ, ಸುದೀಪ್ ಸಿಕ್ಕಾಪಟ್ಟೆ ಪ್ರಾಮುಖ್ಯತೆ ಕೊಟ್ಟರು. ಅದಾದ ನಂತರ ಇವರಿಬ್ಬರು ಒಟ್ಟಿಗೆ ಓಡಾಡುತ್ತಿರುವುದು ಗಾಂಧಿನಗರದವರ ಕಣ್ಣುಕುಕ್ಕಿಸಿದೆ. ಇದರ ಜೋಡಿ ಒಂದಾಗಿರುವುದರ ಹಿಂದಿನ ಮರ್ಮ ಏನು ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಒಂದಲ್ಲ ಒಂದು ದಿನ ಅದು ಗೊತ್ತಾಗೇ ಗೊತ್ತಾಗುತ್ತದೆ ಬಿಡಿ.

ಕಳೆದ ವಾರ ದೃವಸರ್ಜ ಅಭಿನಯದ ನಡೆದ ಅದ್ದೂರಿ ಚಿತ್ರದ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ನಟ ಸುದೀಪ್ ಹಾಗೂ ದರ್ಷನ್ ಆಗಮಿಸಿ ಚಿತ್ರಕ್ಕೆ ಶುಭಕೋರಿದರು. ನಟ ಸುದೀಪ್ ಮೊದಲಿಗೆ ಮಾತನಾಡಿ ಚಿರಂಜೀವಿ ಸರ್ಜಾ ನನ್ನ ಕುಟುಂಬಕ್ಕೆ ಹತ್ತಿರವಾದವರು. ಅವರ ತಮ್ಮ ದೃವ ಸರ್ಜಾ ಸಹ ನನಗೆ ಬೇಕಾದವರಾದ್ದರಿಂದ ಅವರ ಚಿತ್ರಕ್ಕೆ ಶುಭಕೋರಲು ಬಂದಿದ್ದೇನೆ ಎಂದು ಮಾತು ಮುಗಿಸಿ ಮೈಕ್ಅನ್ನು ದರ್ಷನ್ ಕೈಗಿಟ್ಟರು. ನನ್ನ ತಂಗಿಗಾಗಿ ಚಿತ್ರಕ್ಕೆ ಅರ್ಜುನ್ ಹಾಡು ಬರೆದಾಗ ತುಂಬಾ ಇಂಪ್ರೆಸ್ ಆಗಿದ್ದೆ, ಅವರಿಂದಲೇ ಎಲ್ಲ ಹಾಡು ಬರೆಸಿದ್ದೆ.  ಅನಂತರ ಅರ್ಜುನ್ ಅವರ ಅಂಬಾರಿ ಚಿತ್ರ ಯಶಸ್ವಿಯಾಯಿತು. ಇದೀಗ ಅದ್ದೂರಿ ಕೂಡ ಯಶಸ್ವಿಯಾಗಲಿ ಎಂದು ಹರಸಿದರು.

‘ನಾನು ಮಾಡಬೇಕಾದ ಪಾತ್ರವನ್ನು ಧೃವಸರ್ಜಾ ಮಾಡಿದ್ದಾರೆ. ಇದರಿಂದ ಸ್ವಲ್ಪ ಬೇಜಾರಾಯಿತು, ನಂತರ ಚಿತ್ರದ ರಶಸ್ ನೋಡಿದಾಗ ಆ ಪಾತ್ರಕ್ಕೆ ಅವರೇ ಸೂಕ್ತ ಎಂದೆನಿಸಿತು” ಎಂದು ಖುಷಿಯಿಂದ ಹೇಳಿಕೊಂಡರು ಚಿರಂಜೀವಿ ಸರ್ಜಾ.

ನಟರಾದ ಪ್ರೇಮ್, ಅಜಯ್ರಾವ್, ಜೋಗಿ ಪ್ರೇಮ್, ಸಂಗೀತ ನಿದರ್ೇಶಕ ಹರಿಕೃಷ್ಣ, ನಿಮರ್ಾಪಕರಾದ ಕೆ ಮಂಜು, ಶಂಕರ್ಗೌಡ ಚಿತ್ರಕ್ಕೆ ಶುಭ ಕೋರಿದರು. ನಾಯಕಿ ರಾಧಿಕಾ ಪಂಡಿತ್ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.


 
 
 

0 Comments

You can be the first one to leave a comment.

 
 

Leave a Comment