ಮೈಸೂರು ಅರಮನೆ ನವೀಕರಿಸಲು 25 ಕೋಟಿ ರೂ.

0
115

ಮೈಸೂರು : ಪಾರಂಪರಿಕ ಸೌಂದರ್ಯದ ಖನಿಯೇ ಆಗಿರುವ  ಮೈಸೂರು ಅರಮನೆಯ  ಅಂದ-ಚೆಂದ ನವೀಕರಿಸಲು ಪ್ರಸಕ್ತ   ಸಾಲಿನ ಬಜೆಟ್ನಲ್ಲಿ 25 ಕೋಟಿ ರೂ. ಬಿಡುಗಡೆಯಾಗಿರುವುದು- ಒಂದರ್ಥದಲ್ಲಿ  ಅಂಬಾವಿಲಾಸ ಶತಮಾನೋತ್ಸವ ಸಂಭ್ರಮಕ್ಕೆ ಬರೆದಿರುವ ಮುನ್ನಡಿ !

ಮೈಸೂರು  ಅರಮನೆ ನಿರ್ಮಾಣಗೊಂಡು 100 ವರ್ಷ ಕಳೆದರೂ  ಶತಮಾನೋತ್ಸವ ಆಚರಣೆ ಶುರುವಾಗಿಲ್ಲವೇಕೆ ಎಂಬುದು ಬಹಳಷ್ಟು ಮಂದಿಯನ್ನು ಕಾಡುವ ಪ್ರಶ್ನೆ. ಆದರೆ ಈ ವಿಷಯದಲ್ಲಿ  ತಜ್ಞರು ಭಿನ್ನ-ಭಿನ್ನ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ.

1987ರಲ್ಲಿ  ಶುರುವಾದ ಅಂಬಾವಿಲಾಸ ಅರಮನೆಯ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದ್ದ 1912ರಲ್ಲಿ. ಹಾಗಾಗಿ ಈ ವರ್ಷವೇ ಶತಮಾನೋತ್ಸವ ಎಂಬುದು ಕೆಲವರ ವಾದ. ಆದರೆ, ಇದ್ದ ಸ್ಥಳದಲ್ಲಿಯೇ ಮೊದಲಿದ್ದ ಅರಮನೆಯನ್ನು ಇನ್ನಷ್ಟು ವೈಭವದಿಂದ ಪುನರ್ ನವೀಕರಣ ಮಾಡಲಾಗಿದೆಯಷ್ಟೆ ಎಂದು ಹೇಳುವವರೂ ಇದ್ದಾರೆ.  ಅರಮನೆಯಲ್ಲಿರುವ ಯದುವಂಸ್ಥರು ಮಾತ್ರ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎ. ರಾಮದಾಸ್ ಅವರ ವಿಶೇಷ ಆಸಕ್ತಿ ಪರಿಣಾಮ ಶತಮಾನೋತ್ಸವಕ್ಕೆ ನವೀಕರಣ ಕಾಮಗಾರಿಯೇ ನಾಂದಿಯಾಗಿದೆ.

`ಅಂಬಾವಿಲಾಸ ಅರಮನೆ ಕಟ್ಟಡ ನಿರ್ಮಾಣಗೊಂಡು 100 ವರ್ಷ ಪೂರ್ಣಗೊಂಡರೂ, ಅದರ ಪಾರಂಪರಿಕ ಸೊಬಗಿಗೆ ಎಳ್ಳಷ್ಟು  ಕುಂದು ಬಂದಿಲ್ಲ. ದೇಶ-ವಿದೇಶದ ಪ್ರವಾಸಿಗರನ್ನು  ಸೆಳೆಯುವ ವಿಷಯದಲ್ಲಂತೂ, ಆಗ್ರಾದ ತಾಜ್ ಮಹಲ್ನ ಆಕರ್ಷಣೆಯನ್ನೂ ಮೀರಿ ನಿಂತಿದೆ. ಹೀಗಿದ್ದರೂ ಅದು ನಿರ್ಮಾಣ ನಂತರದ ಈ  ಸುದೀರ್ಘ ಅವಧಿಯಲ್ಲಿ  ಯಾವತ್ತೂ ಸಂರಕ್ಷಣೆಯ ಕೆಲಸವನ್ನು ಕಂಡಿಲ್ಲ. ಹಾಗಾಗಿ ಅದರ ಪಾರಂಪರಿಕ ಸೊಬಗಿಗೆ ಒಂದಿಷ್ಟು ನವೀಕರಣ ಹಾಗೂ ಸಂರಕ್ಷಣೆ ಅಗತ್ಯ ಎಂಬುದು  ಪಾರಂಪರಿಕ ತಜ್ಞರ ಶಿಫಾರಸ್. ಹಾಗಾಗಿ ಅರಮನೆ ಸೌಂದರ್ಯದ ನವೀಕರಣಕ್ಕೆ 35 ಕೋಟಿ ರೂ. ಪ್ರಸ್ತಾವನೆಯನ್ನು  ಅರಮನೆ  ಮಂಡಳಿ ಮಂಡಳಿ ಸಲ್ಲಿಸಿತ್ತು.

ಅರಮನೆ ಒಳಾವರಣದಲ್ಲಿರುವ ಅಮೂಲ್ಯ ಹಾಗೂ ಅನನ್ಯ ತೈಲವರ್ಣ ಚಿತ್ರಗಳ ನವೀಕರಣ, ಮೇಲ್ಛಾವಣಿಯಲ್ಲಿರುವ ತೇಗ-ಸಾಗುವನಿ ಕೆತ್ತನೆಗಳ ಪಾಲೀಶ್, ಖಾಸಗಿ ದರ್ಬಾರ್ ಸಭಾಂಗಣದ ಛಾವಣಿಯ ಸ್ಪೈನ್ ಗ್ಲಾಸ್ಗಳ ದುರಸ್ತಿ, ಬೆಳ್ಳಿ ಬಾಗಿಲು, ಬೆಳ್ಳಿ ಕುರ್ಚಿಗಳ ಕಲಾತ್ಮಕ ಕೆಲಸಗಳ ಸಂರಕ್ಷಣೆಯನ್ನೂ ಒಳಗೊಂಡಂತೆ  ವಿವಿಧ ಕೆಲಸಗಳನ್ನು ಮಂಡಳಿ ಕೈಗೆತ್ತಿಕೊಳ್ಳಲಿದೆ.