ಬೇಕಾಗುವ ಸಾಮಾಗ್ರಿಗಳು: *ಬ್ರೆಡ್ ಸ್ಲೈಸ್ – 3 *ತುರಿದ ಕ್ಯಾರೆಟ್ – 1/2 ಕಪ್ *ಬೇಯಿಸಿದ ಆಲೂಗಡ್ಡೆಯನ್ನು ಹಿಸುಕೊಂಡಿದ್ದು – 1/2 ಕಪ್ *ಸಣ್ಣದಾಗಿ ಕತ್ತರಿಸಿದ ಈರುಳ್ಳಿ – 1 ಕಪ್ *ಹಸಿ ಮೆಣಸು – 2 ಚಮಚ *ಕತ್ತರಿಸಿದ ಪುದೀನಾ – ಒಂದು ಮುಷ್ಟಿಯಷ್ಟು *ಕೊತ್ತಂಬರಿ ಸೊಪ್ಪು – ಮುಷ್ಟಿಯಷ್ಟು *ಗರಮ್ ಮಸಾಲಾ – 1 ಚಮಚ *ಉಪ್ಪು – ರುಚಿಗೆ ತಕ್ಕಷ್ಟು *ಜೀರಿಗೆ ಹುಡಿ – 1/2 ಚಮಚ *ಅಕ್ಕಿ ಹುಡಿ – 2 ಚಮಚ *ನೀರು – 1 ಕಪ್ *ಎಣ್ಣೆ – ಕರಿಯಲು

ಮಾಡುವ ವಿಧಾನ 1. ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಬ್ರೆಡ್ ತುಂಡುಗಳನ್ನು ಕೈಯಲ್ಲಿ ತುಂಡು ಮಾಡಿಕೊಂಡು ಪಾತ್ರೆಗೆ ಹಾಕಿ. 2. ತುರಿದ ಕ್ಯಾರೆಟ್, ಹಿಸುಕಿದ ಆಲೂಗಡ್ಡೆ, ಈರುಳ್ಳಿ ಮತ್ತು ಹಸಿಮೆಣಸನ್ನು ಸೇರಿಸಿ. 3. ನಿಮ್ಮ ಕೈಗಳಿಂದ ಸಾಮಾಗ್ರಿಗಳನ್ನು ಕಲಸಿಕೊಳ್ಳಿ/ 4. ಈಗ ಗರಮ್ ಮಸಾಲೆಯನ್ನು ಸೇರಿಸಿ. ಜೀರಿಗೆ ಹುಡಿಯನ್ನು ಸೇರಿಸಿ. 5. ನಿಮ್ಮ ರುಚಿಗೆ ಎಷ್ಟು ಬೇಕೋ ಅಷ್ಟು ಉಪ್ಪು ಹಾಕಿಕೊಳ್ಳಿ. 6. ಸ್ವಲ್ಪ ಸಮಯ ಈ ಮಿಶ್ರಣವನ್ನು ಕಲಸಿ. ಇದರಲ್ಲಿ ತೇವಾಂಶವಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನೀರಿಲ್ಲದಿದ್ದರೆ ಕೊಂಚ ನೀರನ್ನು ಚಿಮುಕಿಸಿ. ಅಂತೆಯೇ ನಾದಲು ಆರಂಭಿಸಿ. 7. ಇದೇ ಪಾತ್ರೆಗೆ ಅಕ್ಕಿ ಹುಡಿಯನ್ನು ಸೇರಿಸಿ. ಮತ್ತು ಮೃದು ಹಿಟ್ಟು ಆಗುವವರೆಗೆ ಕಲಸಿರಿ. 8. ಹಿಟ್ಟನ್ನು 8 ರಿಂದ 9 ಭಾಗಗಳನ್ನಾಗಿ ಮಾಡಿ. ಪ್ರತಿಯೊಂದನ್ನು ಚೆಂಡಿನಂತೆ ತಯಾರಿಸಿಕೊಳ್ಳಿ ಮತ್ತು ವಡೆಯಂತೆ ನಿಮ್ಮ ಹಸ್ತದಲ್ಲಿ ತಟ್ಟಿ ಸಿದ್ಧಪಡಿಸಿಕೊಳ್ಳಿ. 9. ವಡೆಯನ್ನು ಚೆನ್ನಾಗಿ ತಟ್ಟಿ ಚಪ್ಪಟೆಯನ್ನಾಗಿ ಮಾಡಿಕೊಳ್ಳಿ ಇಲ್ಲದಿದ್ದಲ್ಲಿ ಒಳಭಾಗ ಸರಿಯಾಗಿ ಬೇಯದಿರಬಹುದು. 10. ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ. 11. ಎಣ್ಣೆ ಬಿಸಿಯಾಗುತ್ತಿದ್ದಂತೆ ವಡೆಯನ್ನು ಅದರಲ್ಲಿ ಹಾಕಿ. ಹೆಚ್ಚು ಕಾಯಿಸಲು ಹೋಗಬೇಡಿ. ಇನ್ನು ಬಾಣಲೆಯ ಆಕೃತಿಯನ್ನು ಗಮನಿಸಿಕೊಂಡು 2, 3 ವಡೆಯನ್ನು ಒಮ್ಮೆಗೆ ಕರಿದುಕೊಳ್ಳಬಹುದು. 12. ಎರಡೂ ಕಡೆ ವಡೆಯನ್ನು ಚೆನ್ನಾಗಿ ಕರಿದುಕೊಳ್ಳಿ. 13. ವಡೆಯನ್ನು ಹೆಚ್ಚು ಕಾಯಿಸದಿರಿ ಇದರಲ್ಲಿ ಅದು ಹೆಚ್ಚು ಉರಿದುಹೋಗಬಹುದು. 14. ಚಿನ್ನದ ಬಣ್ಣದಕ್ಕೆ ವಡೆ ಬರುವವರೆಗೆ ಕರಿಯಿರಿ 15. ವಡೆ ಈ ಬಣ್ಣಕ್ಕೆ ಬರುತ್ತಿದ್ದಂತೆ ಅದನ್ನು ಹೊರತೆಗೆಯಿರಿ ಮತ್ತು ಕಿಚನ್ ಟವಲ್ ಬಳಸಿಕೊಂಡು ಹೆಚ್ಚುವರಿ ಎಣ್ಣೆಯನ್ನು ಬೇರ್ಪಡಿಸಿ 16. ಈಗ ವಡೆ ಗರಿಗರಿಯಾಗಿರುತ್ತದೆ.