ಬಿಸ್ಕೆಟ್ ರೊಟ್ಟಿ ಬಾಯಿಯಲ್ಲಿ ನೀರೂರಿಸುತ್ತದೆ !

0
5318

ಬೇಕಾಗುವ ಸಾಮಾಗ್ರಿಗಳು :
*ಮೈದಾ – 2.5 ಕಪ್‌ಗಳು
* ಸಣ್ಣ ರವೆ (ಬಾಂಬೆ ರವಾ) – 1/2 ಕಪ್
*ಕಡಲೆ ಹುಡಿ – 1 ಚಮಚ
*ತೆಂಗಿನ ಕಾಯಿ – 1/2 ಕಪ್
*ಕರಿಬೇವಿನ ಎಸಳು – 15-20
*ಶುಂಠಿ ಸಣ್ಣ ತುಂಡು
*ಅರಶಿನ ಹುಡಿ – ಸ್ವಲ್ಪ
*ಮೆಣಸಿನ ಪುಡಿ – 1 ಚಮಚ
*ಸಾಸಿವೆ – 1/2 ಚಮಚ
*ಇಂಗು – 1/4 ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಎಣ್ಣೆ- ಸ್ವಲ್ಪ

ಮಾಡುವ ವಿಧಾನ :
*ರವೆ ಮತ್ತು ಕಡಲೆ ಪುಡಿಯನ್ನು ತವಾದಲ್ಲಿ ತುಸು ಕೆಂಪಗೆ ಹುರಿದುಕೊಳ್ಳಿ, ಹಾಗೂ ಶುಂಠಿ, ಹಸಿಮೆಣಸು ಮತ್ತು ಕರಿಬೇವಿನೆಸಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ
* ಇನ್ನು ಒಂದು ಚಮಚದಷ್ಟು ಎಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿಕೊಳ್ಳಿ. ಬಿಸಿಯಾಗುತ್ತಿದ್ದಂತೆ ಇದಕ್ಕೆ ಸಾಸಿವೆಯನ್ನು ಹಾಕಿ ಇದು ಸಿಡಿಯುತ್ತಿದ್ದಂತೆ ಶುಂಠಿ, ಹಸಿಮೆಣಸು, ಕರಿಬೇವಿನೆಸಳನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ತದನಂತರ ಇದಕ್ಕೆ ಇಂಗು, ಅರಶಿನವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
*ನಂತರ ತೆಂಗಿನ ಕಾಯಿಯನ್ನು ಈ ಮಿಶ್ರಣಕ್ಕೆ ಸೇರಿಸಿ. ಕಾಯಿ ಚಿನ್ನದ ಬಣ್ಣಕ್ಕೆ ಬರುತ್ತಿದ್ದಂತೆ ಮೆಣಸಿನ ಪುಡಿಯನ್ನು ಸೇರಿಸಿ. *ಮೊದಲೇ ಹುರಿದಿಟ್ಟ ರವೆಗೆ ಈ ಮಿಶ್ರಣವನ್ನು ಸೇರಿಸಿ ಒಂದು ನಿಮಿಷ ಹಾಗೆಯೇ ಬಿಡಿ.
*ಮೈದಾ, ಎಣ್ಣೆ, ಉಪ್ಪು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಹಿಟ್ಟು ನಾದಿಕೊಳ್ಳಿ ಈ ಹಿಟ್ಟನ್ನು ನಾದಿ 15 ನಿಮಿಷಗಳ ಮುಚ್ಚಿಡಿ.
*15 ನಿಮಿಷದ ನಂತರ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಉಂಡೆ ಮಾಡಿಕೊಳ್ಳಿ. ಇದನ್ನು ಪೂರಿ ಆಕಾರದಲ್ಲಿ ಲಟ್ಟಿಸಿ. ನಡುವೆ ಮಿಶ್ರಣವನ್ನು ಇಟ್ಟು ಪುನಃ ಲಟ್ಟಿಸಿಕೊಳ್ಳಿ.
*ಬಾಣಲೆಯಲ್ಲಿ ಎಣ್ಣೆ ಇಟ್ಟು ಎಣ್ಣೆ ಬಿಸಿಯಾಗುತ್ತಿದ್ದಂತೆ ನಿಧಾನಕ್ಕೆ ಲಟ್ಟಿಸಿದ ಪೂರಿ ಆಕಾರದ ಬಿಸ್ಕೆಟ್ ರೊಟ್ಟಿಯನ್ನು ಎಣ್ಣೆಗೆ ಹಾಕಿ. ಎರಡೂ ಬದಿ ಇದನ್ನು ಚೆನ್ನಾಗಿ ಹುರಿದುಕೊಳ್ಳಿ.
*ನಂತರ ಚಿನ್ನದ ಬಣ್ಣಕ್ಕೆ ತಿರುಗಿರುವ ಬಿಸ್ಕೆಟ್ ರೊಟ್ಟಿಯನ್ನು ಬಾಣಲೆಯಿಂದ ತೆಗೆದು ತಟ್ಟೆಗೆ ವರ್ಗಾಯಿಸಿ. ಗರಿಗರಿಯಾದ ಸ್ವಾದಿಷ್ಟ ಬಿಸ್ಕೆಟ್ ರೊಟ್ಟಿ ಸವಿಯಲು ಸಿದ್ಧವಾಗಿದೆ. ಸಂಜೆಯ ಚಹಾಕ್ಕೆ ಇದು ಅತ್ಯುತ್ತಮ ತಿಂಡಿಯಾಗಿದೆ.

*ಪ್ರಮಾಣ : 10-12 ಬಿಸ್ಕೆಟ್ ರೊಟ್ಟಿ
*ಸಿದ್ಧತಾ ಸಮಯ: 10
*ಅಡುಗೆಗೆ ಬೇಕಾದ ಸಮಯ: 20 ನಿಮಿಷ