ಬೆಂಗಳೂರು : ನಕಲಿ ಪಾಸ್ ಪೋರ್ಟ್ ದಂಧೆಯಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ ಕನ್ನಡದ ಟಿವಿ 9 ನ್ಯೂಸ್ ಚಾನೆಲ್ ನ ಹಿರಿಯ ವರದಿಗಾರ ಹಾಗೂ ನ್ಯೂಸ್ ಆಯ್ಯಂಕರ್ ಟಿ.ಆರ್. ಶಿವಪ್ರಸಾದ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಈಹಿನ್ನೆಲೆಯಲ್ಲಿಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಆರೋಪಿ ಶಿವಪ್ರಸಾದ್ ಹಾಗೂ ಇತರೆ ಮೂವರನ್ನು ಬಂಧಿಸಿದ್ದಾರೆ.

  • ಏನಿದು ಘಟನೆ :

ನಕಲಿ ಪಾರ್ಸ್ ಕೋರ್ಟ್ ಜಾಲವೊಂದರ ಕುರಿತು ಟಿವಿ-9 ವಾಹಿನಿ ಕುಟುಕು ಕಾರ್ಯಚರಣೆ ನಡೆಸಿತ್ತು. ವಾಹಿನಿಯ ಶಂಕರ್ ಎಂಬ ವರದಿಗಾರ ಈ ಸ್ಟಿಂಗ್ ಅಪರೇಷನ್ ಸಿದ್ದಪಡಿಸಿದ್ದರು. ಇದು ಟೆಲಿಕಾಸ್ಟ್ ಆಗುವ ಮುನ್ನವೇ ಸಂಬಂಧಪಟ್ಟ ಆರೋಪಿಗಳ ಕಿವಿಗೆ ವಿಷಯ ಮುಟ್ಟಿತು. ಆ ಆರೋಪಿಗಳು ಶಂಕರ್ ಅವರಿಗೆ ಕೊಲೆ ಬೆದರಿಕೆ ಹಾಕಿದರು. ಇದರಿಂದ ಗಾಬರಿಗೊಂಡ ವರದಿಗಾರ ಶಂಕರ್ , ಎಚ್.ಎ.ಎಲ್ ಠಾಣೆಗೆ ದೂರು ನೀಡಿದ. ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಯಿತು. ಆಗಲೇ ಈ ಕರೆ ಹಿಂದಿನ ಮಸಲತ್ತು ಬಹಿರಂಗಗೊಂಡದ್ದು ಎಂದು ಮೂಲಗಳು ತಿಳಿಸಿವೆ.

  • ಸುಳಿವು ನೀಡಿದ ಕಾಲ್ ಲಿಸ್ಟ್ :

ಶಂಕರ್ ಗೆ ಕರೆ ಮಾಡಿಜೀವ ಬೆದರಿಕೆ ಹಾಕಿದ ದೂರವಾಣಿ ಸಂಖ್ಯೆ ಹಾಗೂ ಆನಂತರ ಕಾಲ್ ಲಿಸ್ಟ್ ಗಳನ್ನು ಪೊಲೀಸರು ತಡಕಾಡಿದಾಗ ಅದು ಟಿವಿ9 ಕಚೇರಿ ಅಂಗಳಕ್ಕೆ ಬಂದು ನಿಂತಿತು. ಸ್ಟಿಂಗ್ ಅಪರೇಷನ್ ಗೆ ಸಂಬಂಧಿಸಿದ ಮಾಹಿತಿ ಅಲ್ಲಿಂದಲೇ  ಸೋರಿಕೆಯಾಗಿತ್ತು. ಹಿರಿಯ ವರದಿಗಾರಶಿವಪ್ರಸಾದ್  ಸಂಬಂಧಿ ಸಹ ಈ ದಂಧೆಯಲ್ಲಿ ಭಾಗಿಯಾಗಿದ್ದ ಕಾರಣಅವರೇ ಖುದ್ದು ಮಾಹಿತಿಯನ್ನು ಲೀಕ್ ಮಾಡಿದ್ದರು. ಈ ಸಲುವಾಗಿಯೇ ಅವರ ಮೊಬೈಲ್ ಕಾಲ್ ಲಿಸ್ಟ್ ತೆಗೆಸಿ ನೋಡಿದಾಗ ಅದು ಆರೋಪಿಗಳ  ಕಾಲ್ ಲಿಸ್ಟ್ ಗೆ ತಾಳೆಯಾಯಿತು ಎಂದು ಮೂಲಗಳು ತಿಳಿಸಿವೆ.

  • ಸಿಬಿಐ ಗೆ ಪ್ರಕರಣ :

ಬಂಧಿತ ಶಿವಪ್ರಸಾದ್ ಅವರ ತಂದೆ ಮಾಜಿ ಸಿಎಂ ಒಬ್ಬರ ಆಪ್ತರು . ಈ ಹಿನ್ನೆಲೆಯಲ್ಲಿ ಪ್ರಕರಣದಿಂದ ಶಿವಪ್ರಸಾದ್ ಹೆ ಸರು ಕೈ ಬಿಡುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಆದ್ದರಿಂದಲೇ ಸಿಸಿಬಿಯಿಂದ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

2 COMMENTS

  1. What is wrong with these people,we trust the news channels and they turn out to be like this, so now whom to trust????????????

Comments are closed.